ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಹಳಿಯಾಳ: ವಿಪರೀತವಾದ ಹುಚ್ಚುನಾಯಿ ಕಡಿತ - ಐದು ಜನರಿಗೆ ಗಂಭೀರವಾದ ಗಾಯ

ಹಳಿಯಾಳ: ವಿಪರೀತವಾದ ಹುಚ್ಚುನಾಯಿ ಕಡಿತ - ಐದು ಜನರಿಗೆ ಗಂಭೀರವಾದ ಗಾಯ

Sat, 12 Dec 2009 16:55:00  Office Staff   S.O. News Service
ಹಳಿಯಾಳ, ಡಿಸೆಂಬರ್ ೧೨: ಕಳೆದ ಹವಾರು ದಿನಗಳಿಂದ ನಗರದಲ್ಲಿ ಹುಚ್ಚು ನಾಯಿ ಹಾವಳಿ ಹೆಚ್ಚಾಗಿದ್ದು ಇಂದು ಹುಚ್ಚು ನಾಯಿಯೊಂದರ ಕಡಿತಕ್ಕೆ ಐದು ಜನರು ಗಂಭೀರವಾಗಿ ಗಾಯಗೊಂಡಿದ್ದು ಇಬ್ಬರ ಸ್ಥಿತಿ ಚಿಂತಜನಕವಾಗಿದೆ ಎನ್ನಲಾಗಿದೆ. 
 12-hly1.jpg
ನಾಯಿಯ ಕಡಿತಕ್ಕೆ ಗಂಭೀರವಾಗಿ ಗಾಯಗೊಂಡ ಐದು ಜನರಲ್ಲಿ ಓರ್ವ ಮಹಿಳೆ ಹಾಗೂ ಬಾಲಕನೊರ್ವನನ್ನು ಹೆಚ್ಚಿನ ಚಿಕಿತ್ಸೆ ಗಾಗಿ ಹುಬ್ಬಳ್ಳಿಯ ಕಿಮ್ಸಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇವರನ್ನು ಪ್ರಥ್ವಿರಾಜ ಚಂದ್ರಕಾಂತ ಹೈಬತ್ತಿ (೪), ಇವನ ತಾಯಿ ಗಂಗವ್ವಾ ಚಂದ್ರಕಾಂತ ಹೈಬತ್ತಿ (೩೦)ಎಂದು  ಗುರುತಿಸಲಾಗಿದೆ. ಹುಚ್ಚು ನಾಯಿಯ ದಾಳಿಗೆ  ತುತ್ತಾದ ಇನ್ನೂ ಮೂವರಾದ ಮಂಜುನಾಥ ಮೋಹನ ಘೋರ್ಪಡೆ (೧೨), ಬಸ್ಸವ್ವಾ ಬಸ್ಸಯ್ಯ ಮಠಪತಿ (೫೫), ಆದಿಲ್‌ಷಾ ಪೈರೋಜ ಷಾ ತಂಬೋಲಿ (೩) ಇವರನ್ನು ಹಳಿಯಾಳದ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಇವರೆಲ್ಲಚಿಕಿತ್ಸೆ ಪಡೆಯುತ್ತಿದ್ದಾರೆ.  
 
ಹುಚ್ಚು ನಾಯಿ ಕಡಿತದ ಸುದ್ದಿಯು ನಗರದಲ್ಲಿ ಕಾಳ್ಗಿಚ್ಚಿನಂತೆ ಹರಡಿ ಜನರಲ್ಲಿ ಆತಂಕವನ್ನು ಮೂಡಿಸಿತ್ತು ನಂತರ ಮಹೀಳೆಯೋರ್ವಳು ಈ ಹುಚ್ಚು ನಾಯಿಯನ್ನು ಕೊಲ್ಲುವುದರ ಮೂಲಕ ಆ ಆತಂಕವನ್ನು ದೂರವಾಯಿತು ಎನ್ನಲಾಗಿದೆ. 
 12-hly2.jpg
12-hly3.jpg
 
ಹಳಿಯಾಳ ನಗರದಲ್ಲಿ ಹುಚ್ಚು ನಾಯಿ ಕಡಿತದಿಂದ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.  ನಗರದಲ್ಲಿ ಕೆಲ ಹೊತ್ತು ಆತಂಕವನ್ನೇ ಸೃಷ್ಟಿಸಿದ ಹುಚ್ಚು ನಾಯಿ ಐವರಿಗೆ ಮನಬಂದಂತೆ ಕಚ್ಚುತ್ತಾ ಸಾಗಿತು. ನಂತರ ನಾಯಿಯನ್ನು   ಮಹಿಳೆಯೊರ್ವಳು ಕೊಲ್ಲುವ ಮೂಲಕ ಜನರಲ್ಲಿ ಮೂಡಿದ ಆತಂಕ ಕಡಿಮೆಯಾಗಿದೆ. ಹುಚ್ಚು ನಾಯಿಯ ಹಾವಳಿಯಿಂದ ಪಟ್ಟಣ ಜನತೆ ಸಮಾಧಾನದ ನಿಟ್ಟಿಸಿರು ಬಿಟ್ಟಿದ್ದಾರೆ.


Share: